ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐ.ವಿ.ಎಫ್. ಮತ್ತು ಫರ್ಟಿಲಿಟಿ ಕೇಂದ್ರಗಳಲ್ಲಿ ಮನ್ನಣೆ

ಮಣಿಪಾಲ, ಮೇ 28: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐ ವಿ ಎಫ್ ಮತ್ತು ಫರ್ಟಿಲಿಟಿ ಫಲವತ್ತತೆ ಕೇಂದ್ರಗಳಲ್ಲಿ ಒಂದು ಎಂಬ ಮನ್ನಣೆ ದೊರೆತಿದೆ. ಈ ಮನ್ನಣೆಯು ಆಸ್ಪತ್ರೆಯ ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆಗಳು ಮತ್ತು ಆರೋಗ್ಯ ವಿತರಣೆಗೆ ಅದರ ಸಹಾನುಭೂತಿಯ ವಿಧಾನದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿದೆ. ಮಣಿಪಾಲ ಸಹಹಿತಾ ಪ್ರಜನನ ಕೇಂದ್ರ (MARC), ಸಂತಾನಹೀನ ದಂಪತಿಗಳಿಗೆ ಕಳೆದ 35 ವರ್ಷಗಳ […]