ಮಣಿಪಾಲ: ಹೊಟೇಲ್ ನಲ್ಲಿ ಅವಿತು ಕುಳಿತ ಹಾವಿನ ರಕ್ಷಣೆ

ಉಡುಪಿ: ಮಣಿಪಾಲ ಕೆನರಾ ಮಾಲ್ ವೊಂದರ ಹೋಟೆಲ್ ನಲ್ಲಿ ಅಪರೂಪವಾಗಿ ಸಿಗುವ ಹಾವಿನ ರಕ್ಷಣೆ ಮಾಡಲಾಗಿದೆ.ಇಲ್ಲಿನ ಹೋಟೆಲ್ ಒಳಗೆ ಕಾಣಿಸಿಕೊಂಡ ಹಾವು ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿತ್ತು.ಸಣ್ಣ ಗಾತ್ರದ ಈ ಹಾವು ಎಲ್ಲೆಂದರಲ್ಲಿ ತಲೆಮರೆಸಿಕೊಂಡು ಅವಿತುಕೂರುತ್ತಿತ್ತು. ಸುಮಾರು 5 ಗಂಟೆಗಳ ಕಾಲ ಹುಡುಕಿ ಹಾವನ್ನು ಹೊರತೆಗೆಯಲಾಯಿತು. ಈ ಹಾವನ್ನು ವಿಟೇಕರ್ಸ್ ಬೋವಾ ಎಂದು ಗುರುತಿಸಲಾಗಿದೆ. ಕನ್ನಡದಲ್ಲಿ ಇದನ್ನು ಇರ್ತಲೆ ಹಾವು, ಇಮ್ಮಂಡೆ ಹಾವು, ಇರ್ಬಾ ಎಕ್ಕಳೆ ಎಂದು ಕರೆಯುತ್ತಾರೆ. ವಿಷರಹಿತ ಹಾವು ಇದಾಗಿದ್ದು ಉರಗ […]