ಮಣಿಪಾಲ: ಮನೆಗೆ ನುಗ್ಗಿ ಚಿನ್ನ, ದಾಖಲೆಪತ್ರ ಕಳವು.

ಮಣಿಪಾಲ: ಕಕ್ಕುಂಜೆಯ ಅದಯ್ಯ ಹಿರೇಮಠ ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ದಾಖಲೆಪತ್ರಗಳನ್ನು ಕಳವು ಮಾಡಿದ್ದಾರೆ. ಹಿಂಬಾಗಿಲಿನ ಚಿಲಕವನ್ನು ಬಲವಂತವಾಗಿ ತೆರೆದು ಒಳ ಪ್ರವೇಶಿಸಿದ ಕಳ್ಳರು ಬೀಗ ಹಾಕದಿದ್ದ ಕಪಾಟಿನಲ್ಲಿದ್ದ 16 ಗ್ರಾಂ ಚಿನ್ನ ಮತ್ತು ದಾಖಲೆಗಳನ್ನು ಕಳವುಗೈದಿದ್ದಾರೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.