ಮಣಿಪಾಲ ಸಿಂಡಿಕೇಟ್ ಸರ್ಕಲ್: ಇಂದ್ರಾಳಿ ರಸ್ತೆಯ ನಡುವೆ ಯುಟರ್ನ್ ಗೆ ಆಗ್ರಹ: ನಾಳೆ ಡಿಸಿಗೆ ಮನವಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಇಂದ್ರಾಳಿ ರಸ್ತೆಯ ನಡುವೆ ಯುಟರ್ನ್ ಗೆ ಆಗ್ರಹಿಸಿ ಮಣಿಪಾಲ ಜೈ ಭಾರತ್ ಅಸೋಸಿಯೇಶನ್ ನೇತೃತ್ವದಲ್ಲಿ ಸಾರ್ವಜನಿಕರು ನಾಳೆ (ಮಾ. 10) ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಿದ್ದಾರೆ. ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಇಂದ್ರಾಳಿ ರಸ್ತೆಯ ನಡುವೆ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯು ಟರ್ನ್ ನೀಡದಿರುವುದರಿಂದ ಲಕ್ಷ್ಮೀಂದ್ರನಗರ ನಿವಾಸಿ ಗಳಿಗೆ, ವ್ಯಾಪಾರಿಗಳು ಹಾಗೂ ರಿಕ್ಷಾ ಚಾಲಕರಿಗೆ ತೊಂದರೆ ಆಗುತ್ತಿದೆ. […]