ಪಣಂಬೂರಿನಲ್ಲಿ 7ನೇ ಪ್ರವಾಸಿ ಹಡಗು ಲಂಗರು…..!!
ಪಣಂಬೂರು: ಎಂ.ವಿ. ಇನ್ಸಿಗ್ನಿಯಾ ಐಷಾರಾಮಿ ಬೃಹತ್ 7ನೇ ಪ್ರವಾಸಿ ಹಡಗು ಮುಂಬಯಿ ಜಲ ಮಾರ್ಗವಾಗಿ ನವಮಂಗಳೂರು ಬಂದರಿಗೆ ಬುಧವಾರ ಆಗಮಿಸಿತು. ಈ ಹಡಗು 466 ಪ್ರವಾಸಿಗರು, 399 ಸಿಬಂದಿಯನ್ನೊಳಗೊಂಡಿದೆ. ಬಸ್ ಹಾಗೂ ಖಾಸಗೀ ಕಾರುಗಳಲ್ಲಿ ತೆರಳಿದ ಪ್ರವಾಸಿಗರು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೈಂಟ್ ಎಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಮಾರ್ಕೆಟ್, ಕುದ್ರೋಳಿ ದೇವಸ್ಥಾನ, ಗೇರು ಬೀಜ ಸಂಸ್ಕರಣ ಕಂಪೆನಿ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು. ಭೇಟಿ ಸಂದರ್ಭ ಇಲ್ಲಿನ ಯಕ್ಷಗಾನ ಕಲೆ, ಆಯುಷ್ ಚಿಕಿತ್ಸಾ ಪದ್ದತಿ […]