ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಮಂಗಳೂರು: ತ್ರಿಶಾ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಮ್ಯಾನೆಜ್‌ಮೆಂಟ್‌ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್‌ ವಾರ್ಷಿಕೋತ್ಸವವು ಡಾನ್‌ ಬೊಸ್ಕೊ ಹಾಲ್‌ ಬಲ್ಮಠದಲ್ಲಿ ಮೇ 30ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾನಂದಾಜಿಯವರು ವಿದ್ಯಾಥಿಗಳ ಬುದ್ಧಿಮತೆಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಜ್ಞಾನವನ್ನು ಶುದ್ಧಿಕರಿಸಬೇಕು ಹಾಗೂ ಸರಿಯಾದ ದಿಕ್ಕಿನಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು. ಗೌರವ ಅತಿಥಿಯಾಗಿ ಆಗಮಿಸಿದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ನಾರಾಯಣ ಕಾಯರ್‌ಕಟ್ಟೆ ವಿದ್ಯಾರ್ಥಿಗಳ ಸಾಧನೆಗಳನ್ನು ಹೇಳಿ, ಅವರನ್ನು ಪ್ರೋತ್ಸಾಹಿಸಿದರು. […]