ತ್ರಿಶಾ ಕ್ಲಾಸಸ್: ದ್ವಿತೀಯ ಪಿ.ಯು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿ.ಎಸ್.ಇ.ಇ.ಟಿ ಪುನಶ್ಚೇತನ ಕಾರ್ಯಕ್ರಮ.
ಮಂಗಳೂರು: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ನೂತನ ಸಿ.ಎಸ್.ಇ.ಇ.ಟಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಕಾಮತ್ ಎಮ್ ಅವರು ಸಿ. ಎಸ್. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಿ. ಎಸ್. ಇ.ಇ.ಟಿ ಕೋರ್ಸಿನ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ […]