ಮಂಗಳೂರು: ಮಹಿಳೆಯರ ಸ್ನೇಹ ಬೆಳೆಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಆರೋಪಿಯ ಬಂಧನ.
ಮಂಗಳೂರು: ಮಹಿಳೆಯರೊಂದಿಗೆ ಸ್ನೇಹ ಬೆಳೆಸಿಕೊಂಡು ನಾಟಕವಾಡಿ ಅವರೊಂದಿಗೆ ಸಂಪರ್ಕ ಸಾಧಿಸಿ ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ ಹಾಗೂ ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಬೆಳ್ಮಣ್ಣಿನ ರೋಹಿತ್ ಮಥಾಯಿಸ್ (33) ಬಂಧಿತ ಆರೋಪಿ. ಈತ 2021ರಲ್ಲಿ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ರೋಹಿತ್ ಮಥಾಯಿಸ್ […]