ಮಂಗಳೂರು: ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಭೂಮಿ ಪೂಜೆ.

ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು. ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ, ಬಹುತೇಕ ಎಲ್ಲ ಫ್ಲಾಟ್‌ಗಳೂ […]