ಕಂಬಳ ಋತು ಆರಂಭಕ್ಕೆ ದಿನಗಣನೆ: ಈ ಬಾರಿ 25 ಕಂಬಳ ನಿಗದಿ – ನ. 9ಕ್ಕೆ ಆರಂಭವಾಗಿ ಎಪ್ರಿಲ್ 19ಕ್ಕೆ ಮುಕ್ತಾಯ
ಮಂಗಳೂರು: ಕರಾವಳಿಯ ಪರಂಪರೆ ಹಾಗೂ ಪ್ರಮುಖ ಜಾನಪದ ಕ್ರೀಡೆಯಾಗಿರುವ “ಕಂಬಳ’ ಋತು ಆರಂಭಕ್ಕೆ ಇನ್ನು ದಿನಗಣನೆ. ನ.9ರಂದು ಪಣಪಿಲ ಕಂಬಳ ನಡೆಯಲಿದ್ದು, ಇದರಲ್ಲಿ ಸಬ್ ಜೂನಿಯರ್ ಹಾಗೂ ಜೂನಿಯರ್ ಕೋಣಗಳು ಮಾತ್ರ ಭಾಗವಹಿಸಲಿವೆ. ಆದರೆ ನ.17ರ ಪಿಲಿಕುಳ ಕಂಬಳದಲ್ಲಿ ಸೀನಿಯರ್ ಕೋಣಗಳು ಭಾಗವಹಿಸುವ ಕಾರಣದಿಂದ ಕಂಬಳದ ಋತು ಆ ದಿನದಿಂದ ಆರಂಭ ಎನ್ನಲಾಗುತ್ತಿದೆ. ಹಲವಾರು ಅಡೆತಡೆಯ ಮಧ್ಯೆಯೂ ಈ ಬಾರಿ “ಸರಕಾರಿ’ ಪ್ರಾಯೋಜಕತ್ವದಲ್ಲಿ ಪಿಲಿಕುಳ ಕಂಬಳ 10 ವರ್ಷಗಳ ಬಳಿಕ ನಡೆಯುವುದು ವಿಶೇಷ. ಬೆಂಗಳೂರು ಕಂಬಳದ ಬಗ್ಗೆ […]