ಮಂಗಳೂರು: ಇಂಜಿನಿಯರ್‌ ಯುವಕ ನಾಪತ್ತೆ

ಸುರತ್ಕಲ್‌: ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಇಂಜಿನಿಯರ್‌ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಆತನ ತಾಯಿ ರಮ್ಲತ್‌ ಎಂಬವರು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುರತ್ಕಲ್‌ ಕೃಷ್ಣಾಪುರ 6ನೇ ಬ್ಲಾಕ್‌ ನಿವಾಸಿ ಮುಹಮ್ಮದ್‌ ಫೈಝಲ್‌ (24) ಕಾಣೆಯಾದವರು ಎಂದು ತಿಳಿದು ಬಂದಿದೆ. ಮುಹಮ್ಮದ್ ಫೈಜಲ್ ದೇರಳಕಟ್ಟೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದು ನಂತರ ಕೆಲಸ ಹುಡುಕುತ್ತಿದ್ದು ಯಾವುದೇ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಆತ ಡಿ.27ರಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ […]