ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಇವರಿಗೆ “ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ” ಪ್ರಧಾನ

ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಮಂಗಳೂರಿನ ಉರ್ವ ಸ್ಟೋರ್‌ನ ತುಳುಭವನ ಸಿರಿ ಚಾವಡಿಯಲ್ಲಿ 16 ನವೆಂಬರ್ 2025 ರಂದು ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಸಮಾರಂಭದಲ್ಲಿ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರಿಗೆ 2025 ರ ಪ್ರತಿಷ್ಠಿತ ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತುಳುನಾಡು ರಕ್ಷಣಾ ವೇದಿಕೆ (ರಿ) ಮತ್ತು ತುಳುನಾಡು ಸೂರ್ಯ ಪತ್ರಿಕೆ ಜಂಟಿಯಾಗಿ ಆಯೋಜಿಸಿದ 72ನೇ ಸಹಕಾರ ಸಪ್ತಾಹ ಆಚರಣೆಯ ಅಂಗವಾಗಿ […]