ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಹಾಗೂ 13ನೇ ಎಟಿಎಮ್ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಉದ್ಘಾಟನೆ

ಮಂಗಳೂರು:ಎಂ.ಸಿ.ಸಿ. ಬ್ಯಾಂಕಿನ ೨೧ನೇ ಶಾಖೆ ಮತ್ತು 13ನೇ ಎಟಿಎಮ್ ಅನ್ನು ಉಡುಪಿಯ ಕಲ್ಯಾಣಪುರ-ಸಂತೆಕಟ್ಟೆಯಲ್ಲಿ ಭಾನುವಾರ, 5ನೇ ಅಕ್ಟೋಬರ್ 2025ರಂದು ಜೆಎಸ್ ಸ್ಕೇರ್‌ನ ನೆಲಮಹಡಿಯಲ್ಲಿ ಉದ್ಘಾಟಿಸಲಾಯಿತು. ನೂತನ ಶಾಖೆಯನ್ನು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಉದ್ಘಾಟಿಸಿದರು.ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನ ಧರ್ಮಗುರು ರೆ.ಡಾ.ರೋಕ್ ಡಿಸೋಜ ನೂತನ ಶಾಖೆಯನ್ನುಆಶೀರ್ವಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ಮತ್ತುತೊಟ್ಟಂ ಚರ್ಚ್ನ ಧರ್ಮಗುರು ರೆ.ಫಾ.ಡೆನಿಸ್ ಡೆಸಾ ಅವರುಎಟಿಎಂ ಅನ್ನು ಉದ್ಘಾಟಿಸಿದರು. ಕಲ್ಯಾಣಪುರ-ಸಂತೆಕಟ್ಟೆ ಕರಾವಳಿ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಎಟಿಎಂನಿಂದ […]