ಮಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯಿಂದ ‘ಕವಿಸಂಧಿ’ ವಿನೂತನ ಕಾರ್ಯಕ್ರಮ.

ಮಂಗಳೂರು: ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕವಿತಾ ಟ್ರಸ್ಟ್ ವತಿಯಿಂದ ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ (ಮೇ 26) ’ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ಕೊಂಕಣಿ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀಲ್ಬಾ ಖಂಡೇಕಾರ್ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದರು. ಕಾವ್ಯ ಕ್ಷೇತ್ರದಲ್ಲಿನ ತಮ್ಮ ಪಯಣವನ್ನು ವಿವರಿಸುತ್ತಾ ನೀಲ್ಬಾ ಖಂಡೇಕರ್ ಅವರು, “ನನ್ನಲ್ಲಿ ಬರವಣಿಗೆಯ ಪ್ರತಿಭೆ ಇತ್ತು. ಈ ಪ್ರತಿಭೆಯ ಜೊತೆಗೆ ನಾನು […]