ಕಾಲು ಗಂಟಿನ ಮೂಳೆ ಬದಲಾವಣೆ (KNEE JOINT REPLACEMENT SURGERY )ತಡೆಯಲು ಹಾಗೂ ಗಂಟು ನೋವಿಗೆ ಆಯುರ್ವೇದ ಚಿಕಿತ್ಸೆ:ಡಾ. ಎಂ. ವಿ. ಉರಾಳ್

ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ದೇಹದ ವಿವಿಧ ಸಂಧಿಗಳಲ್ಲಿ ಹಿಂಸೆ ನೀಡುವಷ್ಟು ನೋವನ್ನು ಕೊಡುವ ಸಂಧಿವಾತ ಆರಂಭವಾದರೆ ಕುಳಿತರೆ ಏಳಲಾಗದು, ಎದ್ದರೆ ಕುಳಿತುಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ತರುತ್ತದೆ.ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿ ಕೊಳ್ಳುವ ಸಂಧಿವಾತ ದೇಹದ ಯಾವ ಕೀಲುಗಳು ಸೇರುವ ಜಾಗದಲ್ಲಿ ಬೇಕಾದರೂ ಆರಂಭ ವಾಗಬಹುದು. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಂಧಿವಾತದ ಲಕ್ಷಣ ಮತ್ತು ಕಾರಣಗಳು :ಸಾಮಾನ್ಯವಾಗಿ ಸಂಧಿವಾತ 40 ವರ್ಷದ ಬಳಿಕ ಕಾಣಿಸಿಕೊಳ್ಳುತ್ತದೆ.ಸಂಧಿಗಳಲ್ಲಿ ಅಂದರೆ ಭಾರವನ್ನು ಹೊರುವ […]