Instagram ನಲ್ಲಿ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿ ವೀಡಿಯೊ ಹರಿಬಿಟ್ಟ ಪ್ರಕರಣ; ಏಳು ಮಂದಿಯ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣ Instagram ನಲ್ಲಿ ಪರಿಚಯ ಮಾಡಿಕೊಂಡು, ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ರಾಕೇಶ್ ಸಲ್ಡಾನ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. Instagramನಲ್ಲಿ ಪರಿಚಯ:ಗುರುಪುರ ಕೈಕಂಬದ ಕಿನ್ನಿಕಂಬಳ ಬಳಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ Instagram ನಲ್ಲಿ ಕಾರ್ತಿಕ್ ಎಂಬಾತ ಪರಿಚಯವಾಗಿದ್ದ. Instagramನಲ್ಲಿ ಮಾತನಾಡುತ್ತಿದ್ದ […]