ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿದು ಬಾಲಕಿ ಮೃತ್ಯು.

ಉಳ್ಳಾಲ: ಮನೆಯೊಂದರ ತಡೆಗೋಡೆ ಕುಸಿದು ಮನೆ ಮೇಲೆಯೇ ಬಿದ್ದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಬೆಳ್ಳಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ. ನೌಶಾದ್ ಎಂಬವರ ಪುತ್ರಿ ನಯೀಮ(10) ಮೃತಪಟ್ಟ ಬಾಲಕಿ. ನೌಶಾದ್ ಅವರ ಮನೆಯ ಹಿಂಬದಿಯ ಗುಡ್ಡೆ ಹಾಗೂ ತಡೆಗೋಡೆ ಸಂಪೂರ್ಣ ಕುಸಿದು ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಮನೆಯ ಕೊಠಡಿಯ ಕಿಟಕಿ ನಯೀಮ ಮೇಲೆಯೇ ಬಿದ್ದು ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಸೋಮೇಶ್ವರ ಪುರಸಭೆಯ […]