ನ. 21 ರಂದು “ಫುಲ್ ಮೀಲ್ಸ್” ಕನ್ನಡ ಸಿನೆಮಾ ರಾಜ್ಯದ್ಯಂತ ಬಿಡುಗಡೆ.

ಮಂಗಳೂರು: ‘ಫುಲ್ ಮೀಲ್ಸ್’ ಕನ್ನಡ ಸಿನಿಮಾ ನ.21ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಲಿಖಿತ್ ಶೆಟ್ಟಿ ಹೇಳಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಸಿನಿಮಾಕ್ಕೆ ಮೂರು ವರ್ಷ ಕೆಲಸ ಮಾಡಿದ್ದೇವೆ. ಸಿನಿಮಾ ಕಥೆ ಸುಂದರವಾಗಿದ್ದು, ತುಳುನಾಡಿನ ಜನರು ಸಿನಿಮಾ ನೋಡಿ ಹರಸಬೇಕು’ ಎಂದರು. ಚಿತ್ರದ ನಿರ್ದೇಶಕ ವಿನಾಯಕ್ ಮಾತನಾಡಿ, ’ಮದುವೆ ಸಮಾರಂಭಗಳ ಛಾಯಾಗ್ರಾಹಕನೊಬ್ಬ ಪ್ರೀತಿಯ ಬಲೆಗೆ ಬೀಳುವ ಕಥಾಹಂದರವನ್ನು ಹೊಂದಿರುವ ಹಾಸ್ಯಭರಿತ ಚಿತ್ರ ಇದಾಗಿದೆ. ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆಯುವ ಬೆಂಗಳೂರಿನ […]