ಮಂಗಳೂರು:ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ
ಮಂಗಳೂರು: ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು ಇಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದವಆಚರಿಸಲಾಯಿತು. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ವಾಸ್ತುಶಿಲ್ಪಿ ತಜ್ಞೆಯಾದ ದೀಪಿಕಾ ಎ ನಾಯಕ್ ರವರು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು.ಉಪನ್ಯಾಸಕರು ಪೂಕಳಂನ ಸುತ್ತ ತಿರುವಾದಿರ ನೃತ್ಯವನ್ನು ಮಾಡಿದ್ದು, ಇದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು. ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಹಾಗೂ ಉಪನ್ಯಾಸಕ ವೃಂದದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.