ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ ಪದಾಧಿಕಾರಿಗಳ ಪದಗ್ರಹಣ.

ಮಂಗಳೂರು: ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ 2024-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.20 ರಂದು ಸಂಜೆ ಹೋಟೆಲ್ ದೀಪಾ ಕಂಫರ್ಟ್ನಲ್ಲಿ ಜರಗಿತು. ಅಧ್ಯಕ್ಷರಾಗಿ ಟಾಲಿ ಕಂಪ್ಯೂಟರ್ಸ್ ಮಾಲಕರಾದ ಜಗದೀಶ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶ್ರೀ ಭಾರತಿ ಸಿಸ್ಟಮ್ಸನ ಮಾಲಕರಾದ ಶಂಕರನಾರಾಯಣ ಕಾರಂತ್, ಕಾರ್ಯದರ್ಶಿಯಾಗಿ ಡಿಯೊ ಟೆಕ್ ಗ್ಲೋಬಲ್‌ನ ಪಾಲುದಾರರಾದ ರವಿ ಭಟ್, ಖಜಾಂಚಿಯಾಗಿ ಚತುರ್ ಟೆಕ್ನಾಲಜಿಸ್‌ ಮಾಲಕರಾದ ಜಯಪ್ರಕಾಶ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀನಿಧಿ ಸಿಸ್ಟಮ್ಸನ ಮಾಲಕರಾದ ರಾಜೇಶ್ ಅಧಿಕಾರ ಸ್ವೀಕರಿಸಿದರು. ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ […]