ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ತಂದೆ ಮಗಳ‌ ಸಾವು: ವಾಮದಪದವಿನಲ್ಲಿ ದಾರುಣ ಘಟನೆ 

ಮಂಗಳೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಪುತ್ರಿ ಸಾವನ್ನಪ್ಪಿದ ಘಟನೆ ಮಂಗಳವಾರ ಬಂಟ್ವಾಳ ತಾಲೂಕಿನ ವಾಮದಪದವು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಪ್ರಗತಿಪರ ಕೖಷಿಕ ಗೋಪಾಲಕೖಷ್ಣ ಶೆಟ್ಟಿ (65) ಮತ್ತು ಅವರ ಪುತ್ರಿ ದಿವ್ಯಾ ಶೆಟ್ಟಿ (29) ಮೃತಪಟ್ಟ ದುರ್ದೈವಿಗಳು.  ಅಡಿಕೆ ತೋಟದ ಸಮೀಪದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿತ್ತು. ಅದನ್ನರಿಯದೇ ತುಳಿದು ಸಾವನ್ನಪಿದ್ದಾರೆ ಎನ್ನಲಾಗಿದೆ. ಮೆಸ್ಕಾಂ ನಿಲ೯ಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಸ್ಥಳೀಯರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಜಾನುವಾರು ಕಳವುಗೈದು ಕಾರಿನಲ್ಲಿ ಸಾಗಾಟ, ಕಾರು ಅಪಘಾತಕ್ಕೀಡಾಗಿ‌ 5 ಹಸುಗಳು ಸಾವು

ಮಂಗಳೂರು: ಹಸುಗಳನ್ನು ಕಳವುಗೈದು ಸಾಗಾಟ ಮಾಡುತ್ತಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಐದು ಜಾನುವಾರುಗಳು ಸಾವನ್ನಪ್ಪಿರುವ ದಾರುಣ‌ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಮುಂಡಾಜೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಕಳ್ಳರು ಐಷಾರಾಮಿ ಕಾರಿನಲ್ಲಿ ಆರು ಹಸುಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ಪರಿಣಾಮ ಕಾರಿನಲ್ಲಿದ್ದ ಐದು ಹಸುಗಳು ಸಾವನ್ನಪ್ಪಿದ್ದು, ಹಸುವೊಂದರ ಸ್ಥಿತಿ ಗಂಭೀರವಾಗಿದೆ. ಒಂದು ಕಾರಿನಲ್ಲಿ ಆರು ಹಸುಗಳನ್ನು ತುಂಬಿಕೊಂಡು ತೆರಳಿದ್ದು, ಕಾರಿನ ಹಿಂದಿನ ಸೀಟ್‍ಗಳನ್ನು ತೆಗೆದು […]