ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಮಂಗಳೂರಿನಂತಹ ತೆಂಕು ತಿಟ್ಟಿನ ಯಕ್ಷ ಕ್ಷೇತ್ರದಲ್ಲಿ ಬಡಗಿನ ಯಕ್ಷಗಾನ ಅಭ್ಯಾಸಕ್ಕೆ ವೇದಿಕೆ ಒದಗಿಸುವ ಮೂಲಕ, ಮಂಗಳೂರಿನ ಯಕ್ಷಾಭಿನಯ ಬಳಗ ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನಾರ್ಹ ಎಂದು ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಮಂಗಳೂರು ಪುರಭವನದಲ್ಲಿ ಇದೇ ಜನವರಿ 13ರಂದು ನಡೆದ ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಇಷ್ಟು ಜನ ಆಸಕ್ತರಿಗೆ ಯಕ್ಷಾಭ್ಯಾಸ ನೀಡುವ […]