ಮಾಲ್‌ನಲ್ಲಿ ಯುವಕನಿಗೆ ಹಲ್ಲೆ ಪ್ರಕರಣ ಕ್ಷಮಿಸಲಾಗದು: ಖಾದರ್
ಮಂಗಳೂರು: ಮಂಗಳೂರಿನ ಮಾಲ್‌ನಲ್ಲಿ ಯುವಕನಿಗೆ ಹಲ್ಲೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಮರ್ಥಿಸುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು. ಮಂಗಳೂರಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದಯುತ ಹೆಸರು ಪಡೆದುಕೊಂಡಿದೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು. ಸಮಾಜ ಶಾಂತಿ ಕದಡಲು ಸಾಮಾಜಿಕ ಜಾಲತಾಣ ಉಪಯೋಗ ಮಾಡಬಾರದು. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬೇಕು. ಅಧಿಕಾರಿಗಳು ಇಂತಹ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. […]