ಡಿ.ಕೆ. ಶಿವಕುಮಾರ್ ಬಂಧನ‌ ಹಿನ್ನೆಲೆ ಕರಾವಳಿಯಾದ್ಯಂತ‌ ಪ್ರತಿಭಟನೆ: ಬಸ್ ಗಳಿಗೆ ಕಲ್ಲು ತೂರಾಟ: ಹಲವರ‌ ಬಂಧನ

ಮಂಗಳೂರು/ಉಡುಪಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ಬುಧವಾರ ಪ್ರತಿಭಟನೆ ನಡೆಯುತ್ತಿದೆ. ಮಂಗಳೂರುನ‌ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಮಾಜಿ ಸಚಿವ ಅಭಯಚಂದ್ರ ಜೈನ್, ವಿದಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಹರೀಶ್ ಕುಮಾರ್ ಭಾಗಿಯಾಗಿದ್ದು, ಕೂಡಲೇ ಅವರನ್ನು ಬಂಧಿಸಲಾಗಿದೆ. ಉಡುಪಿಯಲ್ಲೂ ನೂರಾರು ಮಂದಿ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲಲ್ಲಿ ಬಸ್ಸುಗಳಿಗೆ ಕಲ್ಲು […]