ಮಂಗಳೂರು: ಪಂಪ್‌ವೆಲ್-ಕಂಕನಾಡಿ ರಸ್ತೆ ಕಾಮಗಾರಿ: ವಾಹನ ಸಂಚಾರಕ್ಕೆ ಬದಲಿ ಮಾರ್ಗ.

ಮಂಗಳೂರು: ನಗರದ ಪಂಪ್‌ವೆಲ್ ಸರ್ಕಲ್‌ನಿಂದ ಕಂಕನಾಡಿ ಬೈಪಾಸ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ 2026ರ ಎಪ್ರಿಲ್ 15 ರವರೆಗೆ (7 ತಿಂಗಳು) ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾಯಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ. ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಬೈಪಾಸ್‌ವರೆಗೆ ರಸ್ತೆಯ ಪ್ರಥಮ ಹಾಗೂ ದ್ವಿತೀಯ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಮಯದಲ್ಲಿ ದ್ವಿ-ಮುಖ ರಸ್ತೆಯ ಒಂದು ರಸ್ತೆಯನ್ನು ಕರಾವಳಿ ಜಂಕ್ಷನ್‌ನಿಂದ ಪಂಪ್‌ವೆಲ್ ವರೆಗೆ ವಾಹನಗಳು ಸಂಚರಿಸಲು ತಾತ್ಕಾಲಿಕವಾಗಿ ಏಕಮಖ ರಸ್ತೆಯನ್ನಾಗಿ ಘೋಷಿಸಿದೆ. ಅದೇ ರೀತಿ ಪಂಪ್‌ವೆಲ್‌ನಿಂದ […]