ಮಂಗಳೂರು ವಿಮಾನ ದುರಂತ: ಇಂದಿಗೆ 13 ವರ್ಷ..

ಮಂಗಳೂರು: ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 13 ವರ್ಷವಾಗುತ್ತಿದೆ. ಹೀಗಾಗಿ ದುರಂತದಲ್ಲಿ ಮೃತಪಟ್ಟವರಿಗೆ ದ.ಕ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಗುರುತು ಪತ್ತೆಯಾಗದ ಮೃತದೇಹ ದಹನ ಮಾಡಿದ ಮಂಗಳೂರು ನಗರದ ಕುಳೂರಿನಲ್ಲಿರುವ ಫಲ್ಗುಣಿ ನದಿ ಕಿನಾರೆ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ದುರಂತದಲ್ಲಿ ಮೃತರಾದ ಕುಟುಂಬ ಸದಸ್ಯರು, ದ.ಕ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಸಂತ್ರಸ್ಥರ ನೆನಪಿನ ಪಾರ್ಕ್ ನಲ್ಲಿ ಹೂಗುಚ್ಚ ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. 2010ರ ಮೇ22ರ ಬೆಳಗ್ಗೆ 6.20ಕ್ಕೆ ದುಬೈಯಿಂದ ಬಂದ […]