ಇಂಟರ್​ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಚೆಲುವೆ , 6 ತಿಂಗಳ ಪ್ರಯತ್ನದಲ್ಲೇ ಮಿಸ್ ಟೀನ್ ಸೂಪರ್ ಗ್ಲೋಬ್

ಮಂಗಳೂರು: ಮಂಗಳೂರಿನ ಸುರತ್ಕಲ್​ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಈ ಸಾಧನೆ ಮಾಡಿದವರು. ಯಾವುದೇ ಸಾಧನೆ ಮಾಡಬೇಕಾದರೂ ಸಾಕಷ್ಟು ಶ್ರಮ ಪಡಬೇಕು. ಹಲವು ವರ್ಷಗಳ ಕಾಲ ಸಾಧನೆ ಮಾಡಬೇಕು. ಆದರೆ ಮಂಗಳೂರಿನ ಯುವತಿಯೊಬ್ಬಳು ಆರು ತಿಂಗಳ ಅವಧಿಯಲ್ಲಿ ಥಾಯ್ಲೆಂಡ್​ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಯಶಸ್ವಿ ದೇವಾಡಿಗ ಅವರು 15- 19 ವರ್ಷದೊಳಗಿನ ವಿಭಾಗದಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಫ್ ಆಗಿ ಕಿರೀಟ […]