ಕಡಬ: ಗೋದಾಮಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಮಂಗಳೂರು: ಅಡಿಕೆ ಹಾಗೂ ತೆಂಗಿನಕಾಯಿ ಇರಿಸಿದ್ದ ಗೋದಾಮಿಗೆ ಬೆಂಕಿ ತಗುಲಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಿಲಿಮಜಲು ರಾಧಾಕೃಷ್ಣ ಭಟ್ ಎಂಬವರ ಮನೆಯ ಪಕ್ಕದಲ್ಲೇ ಇದ್ದ ಗೋದಾಮು ತಡರಾತ್ರಿ ವೇಳೆ ಬೆಂಕಿ ತಗುಲಿ ಉರಿಯುತ್ತಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಪರಿಸರದ ಯುವಕರು ತಕ್ಷಣವೇ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರಾದರೂ, ಬೆಳಗ್ಗಿನ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಅಪಾರ ಅಡಿಕೆ ಹಾಗೂ ತೆಂಗಿನಕಾಯಿ ಸುಟ್ಟು ಕರಕಲಾಗಿದ್ದು, […]