ಸೋಮನಾಥ ದೇವಾಲಯದಲ್ಲಿ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಪತ್ತೆ ; ಮಂಗಳೂರು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರದ ಸೋಮೇಶ್ವರ ದೇವಾಲಯದಲ್ಲಿ ಆಳುಪ ಚಕ್ರವರ್ತಿ ಮೊದಲನೇ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಕಂಡು ಬಂದಿದೆ ಎಂದು ಕರಾವಳಿಯ ಪುರಾತತ್ವ ವಿದ್ವಾಂಸ ಪ್ರೊ.ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಮಂಗಳೂರಿನ ಸೋಮೇಶ್ವರ ದೇವಾಲಯದಲ್ಲಿ ಆಳುಪ ಚಕ್ರವರ್ತಿ ಮೊದಲ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಪತ್ತೆಯಾಗಿದೆ ಶಾಸನದ ಚಿತ್ರಿತ ಪಟ್ಟಿಕೆಗಳು : ಶಾಸನದ ಮೇಲ್ಭಾಗದಲ್ಲಿ ಆಕರ್ಷಕವಾದ ಎರಡು ಚಿತ್ರಪಟ್ಟಿಕೆಗಳಿದ್ದು ಕೆಳಗಿನ ಪಟ್ಟಿಕೆಯಲ್ಲಿ ಕುಲಶೇಖರ ಆಳುಪೇಂದ್ರನನ್ನು ಬಲಗೈಯಲ್ಲಿ ಖಡ್ಗವನ್ನು […]