ಮಂಗಳೂರು: 70 ವರ್ಷದ ಕೊರೊನ ಪೀಡಿತ ಮಹಿಳೆ ಪೂರ್ಣ ಗುಣಮುಖ: ಇಂದು ಆಸ್ಪತ್ರೆಯಿಂದ ಬಿಡುಗಡೆ
ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ಪೀಡಿತರಾಗಿದ್ದ 70 ವರ್ಷದ ಮಹಿಳೆ ಪೂರ್ಣ ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇರಳ ಮೂಲದವರಾದ ಇವರು ಸೌದಿ ಅರೇಬಿಯಾದಿಂದ ಮಾರ್ಚ್ 9ರಂದು ಕ್ಯಾಲಿಕಟ್ ಆಗಮಿಸಿದ್ದರು. ಅನಾರೋಗ್ಯದಿಂದ ಮಾರ್ಚ್ 19ರಂದು ಮಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಮಾರ್ಚ್ 24ರಂದು ಕೊರೊನಾ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಡಪಟ್ಟಿತ್ತು. ಅನಂತರ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಏಪ್ರಿಲ್ 7 ಮತ್ತು 8ರಂದು ಗಂಟಲಿನ ದ್ರವ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದು, ಹೀಗಾಗಿ ಇಂದು ಆಸ್ಪತ್ರೆಯಿಂದ ಮಹಿಳೆ […]