ಮಂಗಳೂರು: ಬಾಲಕನ ಅಪಹರಣ: ಓರ್ವನ ಬಂಧನ
![](https://udupixpress.com/wp-content/uploads/2019/09/IMG_20190916_172529.jpg)
ಮಂಗಳೂರು: ಬಾಲಕನೋರ್ವನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಮಹೇಶ್ ಬಂಧಿತ ಆರೋಪಿ. ಈತ 7 ವರ್ಷ ವಯಸ್ಸಿನ ಬಾಲಕನನ್ನು ಬೆಂಗಳೂರಿನ ಯಲಹಂಕದ ರೈಲ್ವೆ ನಿಲ್ದಾಣದಿಂದ ಅಪಹರಿಸಿ ತಂದು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿನ ಕಾರ್ಮಿಕ ಪೂರೈಕೆಯ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಇರಿಸಿ ಹೋಗಿದ್ದ. ಈ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಬೆಂಗಳೂರಿನ ಬನಶಂಕರಿಯ ಶಿಲ್ಪಾ ಮತ್ತು ಆಕೆಯ ಪತಿ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹೇಶ್ ಎಂಬಿಬ್ಬರ […]