ಸ್ಮಾರ್ಟ್ ಸಿಟಿಗೊಂದು ಐಡೆಂಟಿಟಿ-ರೋಹನ್ ಸಿಟಿಯಲ್ಲಿ ಬುಕ್ಕಿಂಗ್ ಪ್ರಾರಂಭ

ಮಂಗಳೂರು: ಸಹಕಾರಿ ರಂಗದ ಧುರೀಣ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸಹ ಪ್ರವರ್ತಕರಾಗಿರುವ ರೋಹನ್ ಮೊಂತೇರೋ ನಾಯಕತ್ವದ ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರೋಹನ್ ಕಾರ್ಪೋರೇಶನ್ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ರೋಹನ್ ಸಿಟಿ ಸಮುಚ್ಛಯವನ್ನು ಅಭಿವೃದ್ದಿ ಪಡಿಸಿದ್ದು, ಇದರ ಪ್ರಾಥಮಿಕ ಕಾಮಗಾರಿ ಆರಂಭಗೊಂಡಿದ್ದು, ಇದೀಗ ಬುಕ್ಕಿಂಗ್ ಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲಕ ರೊಹನ್ ಮೊಂತೆರೋ ಹೇಳಿದರು. ಅವರು ನಗರದಲ್ಲಿ ಪ್ರತಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿದರು. […]

ಮಂಗಳೂರು: ನಾಳೆ ಪುರಭವನದಲ್ಲಿ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ

ಮಂಗಳೂರು: ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿಗಾಗಿ ಮೂರು ವರ್ಷಗಳ ಹಿಂದೆ ಯಕ್ಷಾಭಿನಯ ಬಳಗ ಎಂಬ ಸಂಘವನ್ನು ಹುಟ್ಟುಹಾಕಿ ಯಕ್ಷಗುರು ‘ಯಕ್ಷಶ್ರೀ’ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ನಿರ್ದೇಶನದಲ್ಲಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ. ಈ ಸಂಘದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ಕೂಡಾ ಯಕ್ಷಗಾನದ ತಾಳ ಮತ್ತು ಪ್ರಸಂಗ ಅಭ್ಯಾಸ ಮಾಡುತ್ತಿದ್ದಾರೆ. ಗುರುಗಳ ನಿರ್ದೇಶನದಲ್ಲಿ ಸಂಘದ ಸದಸ್ಯರು ಈಗಾಗಲೇ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿರುತ್ತಾರೆ. ಇದೀಗ ಯಕ್ಷಾಭಿನಯ ಬಳಗದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರಿಂದ ಜ 8, […]

ಬೆಂಗಳೂರು-ಮಂಗಳೂರು ಮಾರ್ಗಕ್ಕೆ ಗತಿ ಶಕ್ತಿ: ರಾ.ಹೆ -75ರ ನೆಲಮಂಗಲ-ದೇವಿಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ

ಬೆಂಗಳೂರು: ಬೆಂಗಳೂರು-ಮಂಗಳೂರು ರಾ.ಹೆ-75 ರಲ್ಲಿ ನೆಲಮಂಗಲ-ದೇವಿಹಳ್ಳಿ ನಡುವಿನ ವಿಭಾಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ವಿಭಾಗವು ಮೈಸೂರು, ಸಕಲೇಶಪುರ, ಹೆಳೇಬೀಡು, ಧರ್ಮಸ್ಥಳ ಮುಂತಾದ ಪ್ರವಾಸಿ ತಾಣಗಳಿಗೆ ವೇಗದ ಸಂಪರ್ಕವನ್ನು ಸಶಕ್ತಗೊಳಿಸುತ್ತದೆ . ವಾರಾಂತ್ಯದಲ್ಲಿ ಈ ಮಾರ್ಗವು ಸುಮಾರು 30000 ವಾಹನಗಳನ್ನು ಧಾರಣೆ ಮಾಡುವ ಸಾಮಾರ್ಥ್ಯ ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ-ಸಕಲೇಶಪುರ-ಧರ್ಮಸ್ಥಳವನ್ನು ಸಂಪರ್ಕಿಸುವ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ. ಮೈಕ್ರೊ-ಸರ್ಫೇಸಿಂಗ್ ಮಿಶ್ರಣದ ಬಾಗುವ ಶಕ್ತಿಯನ್ನು ಹೆಚ್ಚಿಸಲು ಫೈಬರ್ ಬಲವರ್ಧಿತ […]

ಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗಾಗಿ ಹಿಂದೂ ಸಂಘಟನೆಗಳ ವತಿಯಿಂದ ಸಹಾಯವಾಣಿ

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಅನ್ಯ ಹಿಂದೂ ಸಂಘಟನೆಗಳ ವತಿಯಿಂದ ಲವ್ ಜಿಹಾದ್ ಸಂತ್ರಸ್ತರಿಗಾಗಿ ವಿನೂತನ ಮಾದರಿಯ ಸಹಾಯವಾಣಿಯೊಂದನ್ನು ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಅಂಥಹವರಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.   ಇಂತಹ ಸಂತ್ರಸ್ತರಿದ್ದಲ್ಲಿ 9148658108 ಗೆ ಕರೆ ಮಾಡಬಹುದು ಅಥವಾ 9591658108 ಗೆ ವಾಟ್ಸ್ ಆಪ್ ಮಾಡಬಹುದು ಅಥವಾ [email protected] ಗೆ ಇ-ಮೇಲ್ ಕಳುಹಿಸಬಹುದು […]

ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿಗೆ ಕಾದಂಬರಿಕಾರ ವಿವೇಕಾನಂದ ಕಾಮತ್ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನೊಳಗೊಂಡ ಲಯನ್ಸ್ ಜಿಲ್ಲೆ 317ಡಿಯ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಪ್ರತಿ ವರ್ಷ ಕನ್ನಡದ ಯುವ ಸಾಹಿತಿಗಳು, ಸಾಂಸ್ಕೃತಿಕ ಸಾಧಕರು, ಸಂಘಟಕರಿಗೆ ನೀಡುವ ಕದ್ರಿ ಲಯನ್ಸ್ ಕನ್ನಡ ರತ್ನ (ಕಲಕ) ಪ್ರಶಸ್ತಿಯ 2022ನೇ ಸಾಲಿಗೆ ಸಾಹಿತಿ, ಕಾದಂಬರಿಕಾರ ವಿವೇಕಾನಂದ ಕಾಮತ್ ಇವರು ಆಯ್ಕೆಯಾಗಿದ್ದಾರೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವೀಧರರಾಗಿರುವ ಇವರು, 1998ರಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಇವರ […]