ಮೈಸೂರಿನ ಕುಟುಂಬ ಮಂಗಳೂರಿನಲ್ಲಿ ಆತ್ಮಹತ್ಯೆ

ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಮೈಸೂರಿನಿಂದ ಬಂದಿದ್ದರೆನ್ನಲಾದ ಒಂದೇ ಕುಟುಂಬದ ನಾಲ್ವರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ದೇವೇಂದ್ರ (48), ನಿರ್ಮಲಾ (38) ಮತ್ತು 9 ವರ್ಷದ ಅವಳಿ ಹೆಣ್ಣು ಮಕ್ಕಳಾದ ಚೈತ್ರ ಮತ್ತು ಚೈತನ್ಯ ಎಂದು ಗುರುತಿಸಲಾಗಿದೆ. ಕುಟುಂಬವು ಮಾರ್ಚ್ 27 ರಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡಿತ್ತು ಮತ್ತು ಮಾರ್ಚ್ 30 ರಂದು ಖಾಲಿಮಾಡಬೇಕಾಗಿತ್ತು. ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಇಬ್ಬರು […]

ರೋಹನ್ ಕಾರ್ಪೋರೇಷನ್ ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಮಂಗಳೂರು: ಮಾರ್ಚ್ 4 ರಂದು ರೋಹನ್ ಕಾರ್ಪೋರೇಷನ್ ಇಂದಿಯಾ ಪ್ರೈ.ಲಿ ಸಂಸ್ಥೆ ವತಿಯಿಂದ ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿ ಸೈಟ್ ಪ್ರಾಜೆಕ್ಟ್ನಲ್ಲಿ 52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಿತು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋಹನ್ ಮೊಂತೇರೋ ಸುರಕ್ಷಾ ಧ್ವಜವನ್ನು ಹಾರಿಸಿ, ನೌಕರರಿಗೆ ಕಿರು ಸಂದೇಶವನ್ನು ನೀಡಿದರು.

ಮಂಗಳೂರಿನಲ್ಲಿ ರದ್ದಾದ ಕಾವೇರಿ ಆನ್ ಲೈನ್ ಪೈಲಟ್ ಪ್ರಾಜೆಕ್ಟ್ ಉಡುಪಿಗೇತಕ್ಕೆ? ರಮೇಶ್ ಕಾಂಚನ್ ಆರೋಪ

ಉಡುಪಿ: ಭೂ ಮಾರಾಟ, ಖರೀದಿ ಇತ್ಯಾದಿ ದಾಖಲೆಗಳ ನೋಂದಣಿಯನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ನಡೆಸುವ ಸರಕಾರದ ಕಾವೇರಿ ವೆಬ್ ಪೋರ್ಟಲ್ ಸೇವೆಯನ್ನು ಮಂಗಳೂರು ತಾಲೂಕು ನೋಂದಾವಣಾ ಕಚೇರಿಯಲ್ಲಿ ಸಾರ್ವಜನಿಕರ ವಿರೋಧದ ಕಾರಣ ರದ್ಧು ಪಡಿಸಿರುವ ಬೆನ್ನಿಗೆ ಆ ಕಡ್ಡಾಯ ಆನ್‌ಲೈನ್ ಪ್ರಾಜೆಕ್ಟನ್ನು ಉಡುಪಿಯಲ್ಲಿ ಜಾರಿಗೊಳಿಸಲು ದಿಢೀರ್ ಯತ್ನ ನಡೆದಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ. ಮಂಗಳೂರು ತಾಲೂಕು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಂತಹ ಪ್ರಯತ್ನ ನಡೆದಾಗ ಜನಸಾಮಾನ್ಯರೊಂದಿಗೆ ವಕೀಲರು, ದಸ್ತಾವೇಜು ಬರಹಗಾರರು […]

ದ.ಕ ಜಿಲ್ಲೆ ಹೊಸ ಎಸ್ಪಿಯಾಗಿ ಅಮಾತೆ ವಿಕ್ರಮ್ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಋಷಿಕೇಷ್ ಸೋನಾವಾಣೆ ಭಗವಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಗೆ ಐಪಿಎಸ್ ಅಧಿಕಾರಿ ಅಮಾತೆ ವಿಕ್ರಮ್ ಅವರನ್ನು ಎಸ್ಪಿ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ನಾಲ್ವರು ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾಣೆ ಭಗವಾನ್ ಅವರನ್ನು ಗುಪ್ತಚರ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಇಲ್ಲಿಗೆ ಗುಪ್ತಚರ ವಿಭಾಗದಲ್ಲಿದ್ದ ಅಮಾತೆ ವಿಕ್ರಮ್ ಅವರನ್ನು ನೇಮಕ ಮಾಡಲಾಗಿದೆ. ಅಮಾತೆ ವಿಕ್ರಮ್ […]

ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ

ಮಂಗಳೂರು: ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 30ರಂದು ನಡೆದಿದೆ. ಮೃತ ಬಾಲಕನನ್ನು ಜ್ಞಾನೇಶ್(14) ಎಂದು ಗುರುತಿಸಲಾಗಿದೆ. ಪದವು ಬಿ ಹಳ್ಳಿಯ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಜ್ಞಾನೇಶ್, ಜಗದೀಶ್ ಮತ್ತು ವಿನಯಾ ದಂಪತಿಯ ಪುತ್ರ. ಈತ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದ ಮತ್ತು ಈ ಕಾರಣಕ್ಕಾಗಿ ಈತನ ತಾಯಿ ಈತನಿಗೆ ಬೈದಿದ್ದಾರೆ. ತಾಯಿಯ ಬೈಗುಳದ ಬಳಿಕ, ಸ್ನಾನ ಮಾಡಿ ಬರುವುದಾಗಿ […]