ಜಿಲ್ಲಾ ಮಟ್ಟದ ಪ್ರಧಾನಿ ಮೋದಿ ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ/ಮಂಗಳೂರು: ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೆಲ್ಕಾರ್ ಯುವ ಸಂಗಮ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಮೋದಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಎ4 ಸೈಜ್ ಬಿಳಿ ಹಾಳೆಯಲ್ಲಿ ಪೆನ್ಸಿಲ್ ನಿಂದ ಚಿತ್ರ ರಚಿಸಬೇಕಿದ್ದು, ಆಯ್ಕೆಯಾದ ಚಿತ್ರಕ್ಕೆ ಸೂಕ್ತ ಬಹುಮಾನ ನೀಡಲಾಗುವುದು. ಚಿತ್ರದ ಕೆಳಭಾಗದಲ್ಲಿ ಸ್ಪರ್ಧಿಯ ಹೆಸರು- ವಿಳಾಸ, ಮೊಬೈಲ್ ನಂಬ್ರ ನಮೂದಿಸಬೇಕು. ಅನುಭವಿ ಚಿತ್ರಕಲಾವಿದರು ತೀರ್ಪುಗಾರರಾಗಿ ಭಾಗವಹಿಸಲಿದ್ದು, ಅವರ […]
ಕರಾವಳಿಯಲ್ಲಿ ಮೊಂತಿ ಫೆಸ್ತ್ ಆಚರಣೆಯ ಸಡಗರ

ಉಡುಪಿ/ಮಂಗಳೂರು: ಇಂದು ಕನ್ಯಾ ಮಾತೆ ಮೇರಿಯ ಜನ್ಮ ದಿನವಾಗಿದ್ದು ಕರಾವಳಿಯ ಕ್ರೈಸ್ತರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಕರಾವಳಿ ಕರ್ನಾಟಕದ ಎಲ್ಲಾ ಚರ್ಚುಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ಜರುಗುತ್ತವೆ. ಆಗಸ್ಟ್ 30 ರಿಂದ ವಿಶೇಷ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಅಥವಾ ತೆನೆ ಹಬ್ಬದ ಆಚರಣೆ ಆರಂಭವಾಗಿ, 9 ದಿನಗಳ ಕಾಲ ನಡೆಯುತ್ತದೆ. ಪುಟಾಣಿ ಮಕ್ಕಳು ತಮ್ಮ ಮನೆಯಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನು ತಟ್ಟೆಯಲ್ಲಿಟ್ತು ಅಲಂಕರಿಸಿ ಮಾತೆ ಮೇರಿಗೆ ಸಮರ್ಪಿಸುತ್ತಾರೆ. ಕಡೆ ದಿನ, ಸೆಪ್ಟೆಂಬರ್ 8 ರಂದು […]
ಮಂಗಳೂರು: ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಣೆ

ಮಂಗಳೂರು: ಸೋಮವಾರದಂದು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಹೆಸರಾಂತ ಇ.ಎನ್.ಟಿ ಶಸ್ತ್ರ ಚಿಕಿತ್ಸಕ ಡಾ.ಕಿಶೋರ್ ಶೆಟ್ಟಿ ಕಾರ್ಯಕರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪದವಿಪೂರ್ವ ಹಂತವೆಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಡಿಪಾಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು, ಸಮರ್ಪಣಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕನಸು ಯಾವಾಗಲೂ ದೊಡ್ಡದಾಗಿರಬೇಕು ಎಂದರು. ಈ ಸಂದರ್ಭದಲ್ಲಿಎಕ್ಸ್ಪರ್ಟ್ ನ ನೂತನ ಸಭಾಂಗಣ ‘ಎಕ್ಸ್ಪೋಡಿಯಂ’ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. […]
ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ: ಪ್ರಧಾನಿ ಮೋದಿ

ಮಂಗಳೂರು: ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿಗೆ ಮಂಗಳೂರಿನ ಜನತೆ ಭರ್ಜರಿ ಸ್ವಾಗತ ನೀಡಿದ್ದರು. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿ, “ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ” ಎಂದು ತಮ್ಮ ಮಂಗಳೂರು ಭೇಟಿಯ ಸಮಯದಲ್ಲಿ ಜನರಿಂದ ದೊರೆತ ಪ್ರೀತಿಗೆ ವಿನಮ್ರತೆಯನ್ನು ವ್ಯಕ್ತಪಡಿಸಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ: ಪ್ರಧಾನಿ ಮೋದಿ/ಟ್ವಿಟರ್
ಬೆಳ್ತಂಗಡಿ: ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಿಂದ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 1ರಂದು ಪ್ರಾರಂಭವಾದ ಈ ಅಭಿಯಾನ ಗುರುವಾರದಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು 1 ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ ಗಳನ್ನು ತುಳು ಭಾಷೆಯ ಮಾನ್ಯತೆಗಾಗಿ ದೇಶದ ಪ್ರಧಾನಿಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲವನ್ನು […]