2022-23 ಸಾಲಿನಲ್ಲಿ 12.20 ಕೋಟಿ ದಾಖಲೆಯ ಲಾಭ ಗಳಿಸಿದ ಎಂ.ಸಿ.ಸಿ ಬ್ಯಾಂಕ್: ಪಂಚ ಜಿಲ್ಲೆಗಳಲ್ಲಿ ಕಾರ್ಯಕ್ಷೇತ್ರ ವಿಸ್ತರಣೆಯ ಸಾಧನೆ

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ111 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2023 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ 12.20 ಕೋಟಿ ರೂಪಾಯಿ ಲಾಭ ಗಳಿಕೆಯನ್ನು ದಾಖಲಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಮಾಡಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.37% ಎನ್.ಪಿ.ಎ. ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾಹಿತಿ ನೀಡಿದರು. ಅವರು ಬುಧವಾರದಂದು ಮಂಗಳೂರಿನಲ್ಲಿರುವ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ […]
ಮಂಗಳೂರು: 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್ ನಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರ ಆರಂಭ

ನಾವು ಮಂಗಳೂರು ನಗರದಲ್ಲಿ ಹೊರಾಂಗಣ ಮತ್ತು ಒಳಾಂಗಣ ಎರಡರಲ್ಲೂ ಬೆಳೆಯುತ್ತಿರುವ ಕ್ರಿಕೆಟ್ ಕೋಚಿಂಗ್ ಫೆಸಿಲಿಟಿಗಳಲ್ಲಿ ಒಂದಾಗಿ ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ. ನಮ್ಮ ವೃತ್ತಿಪರ ತರಬೇತುದಾರರ ಪರಿಣತಿ ಮತ್ತು ಅನುಭವದೊಂದಿಗೆ ಕ್ರಿಕೆಟ್ ಉತ್ಸಾಹಿ ಹುಡುಗರು ಮತ್ತು ಹುಡುಗಿಯರಿಗೆ 360 ಡಿಗ್ರಿ ಕ್ರಿಕೆಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಒದಗಿಸುತ್ತೇವೆ. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಇನ್ ಇಂಡಿಯಾ ಇದರ ಅರ್ಹ ತರಬೇತುದಾರ ಸ್ಯಾಮ್ಯುಯೆಲ್ ಜಯರಾಜ್ ಮುತ್ತು ಮತ್ತು ದೇವದಾಸ್ ನಾಯಕ್, ಪ್ರಸ್ತುತ 22 […]
ದ.ಕ ಜಿಲ್ಲೆ: ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಣೆ

ಮಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ಫಲಿತಾಂಶ 2023 ಅನ್ನು ಇಂದು ಮಾರ್ಚ್ 31, 2023 ರಂದು ಬಿಡುಗಡೆ ಮಾಡಿದೆ. ಪೂರ್ವ ವಿಶ್ವವಿದ್ಯಾಲಯ ಪರೀಕ್ಷೆ (ಪಿಯುಸಿ) 1 ನೇ ವರ್ಷದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು result.dkpucpa.com ಅಧಿಕೃತ ವೆಬ್‌ಸೈಟ್ ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಫಲಿತಾಂಶವು ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಮಾತ್ರ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.
ಮೈಸೂರಿನ ಕುಟುಂಬ ಮಂಗಳೂರಿನಲ್ಲಿ ಆತ್ಮಹತ್ಯೆ

ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಮೈಸೂರಿನಿಂದ ಬಂದಿದ್ದರೆನ್ನಲಾದ ಒಂದೇ ಕುಟುಂಬದ ನಾಲ್ವರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ದೇವೇಂದ್ರ (48), ನಿರ್ಮಲಾ (38) ಮತ್ತು 9 ವರ್ಷದ ಅವಳಿ ಹೆಣ್ಣು ಮಕ್ಕಳಾದ ಚೈತ್ರ ಮತ್ತು ಚೈತನ್ಯ ಎಂದು ಗುರುತಿಸಲಾಗಿದೆ. ಕುಟುಂಬವು ಮಾರ್ಚ್ 27 ರಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡಿತ್ತು ಮತ್ತು ಮಾರ್ಚ್ 30 ರಂದು ಖಾಲಿಮಾಡಬೇಕಾಗಿತ್ತು. ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಇಬ್ಬರು […]
ರೋಹನ್ ಕಾರ್ಪೋರೇಷನ್ ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಮಂಗಳೂರು: ಮಾರ್ಚ್ 4 ರಂದು ರೋಹನ್ ಕಾರ್ಪೋರೇಷನ್ ಇಂದಿಯಾ ಪ್ರೈ.ಲಿ ಸಂಸ್ಥೆ ವತಿಯಿಂದ ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿ ಸೈಟ್ ಪ್ರಾಜೆಕ್ಟ್ನಲ್ಲಿ 52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಿತು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋಹನ್ ಮೊಂತೇರೋ ಸುರಕ್ಷಾ ಧ್ವಜವನ್ನು ಹಾರಿಸಿ, ನೌಕರರಿಗೆ ಕಿರು ಸಂದೇಶವನ್ನು ನೀಡಿದರು.