ಫೆ.14 ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥೋತ್ಸವ
![](https://udupixpress.com/wp-content/uploads/2020/02/mandarthi-415x304-1-791x1024.jpg)
ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಫೆ. 10ರಂದು ಪ್ರಾರಂಭಗೊಂಡಿದ್ದು, ಫೆ.16ರ ತನಕ ಜರಗಲಿದೆ. ಫೆ. 13ರಂದು ಕೆಂಡಸೇವೆ, ಹಾಲಿಟ್ಟು ಸೇವೆ, ನಾಗದರ್ಶನ, 14ರಂದು ಶ್ರೀ ಮನ್ಮಹಾರಥೋತ್ಸವ, 15ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವ, ಬಳಿಕ ಐದು ಮೇಳದವರಿಂದ ಯಕ್ಷಗಾನ ಸೇವೆ ಆಟ ಜರಗಲಿದೆ ಎಂದು ಅನುವಂಶಿಕ ಮೊಕ್ತೇಸರ ಎಚ್. ಧನಂಜಯ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.