ಮಂಚಿಕೋಡಿ: ಚಿನ್ನದ ಸರ ಸುಲಿಗೆ; ಆರೋಪಿಯ ಬಂಧನ

ಉಡುಪಿ: ಶಿವಳ್ಳಿ ಗ್ರಾಮದ ಮಂಚಿಕೋಡಿ ಎಂಬಲ್ಲಿ ಗುರುವಾರ ನಡೆದ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಚಿಕೋಡಿಯ ನಿವಾಸಿ ಪ್ರವೀಣ್ ನಾಯ್ಕ್ (32) ಎಂದು ಗುರುತಿಸಲಾಗಿದೆ. ಈತ ಗುರುವಾರ ಬೆಳಿಗ್ಗೆ 8.30ಕ್ಕೆ ಬೈಕ್ ನಲ್ಲಿ ಬಂದು ಮಣಿಪಾಲ ಪ್ರೆಸ್ ಕೆಲಸಕ್ಕೆ ಹೋಗುತ್ತಿದ್ದ ಮಂಚಿಕೋಡಿಯ ಲಲಿತಾ ನಾಯ್ಕ್ ಎಂಬುವವರ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಲಲಿತಾ ಅವರು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನಗೆ ಪರಿಚಯ ಇರುವ […]