ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಸಿಲುಕಿರುವ 300 ಜನ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ
ಮನಾಲಿ : ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಸಿಲುಕಿರುವ 300 ಜನ ಪ್ರವಾಸಿಗರನ್ನು ರಕ್ಷಿಸಲು ಹಿಮ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ.ಸ್ಪಿತಿ ಕಣಿವೆಯ ಹಿಮಾಚ್ಛಾದಿತ ರಸ್ತೆಯಲ್ಲಿ 300 ಪ್ರವಾಸಿಗರು ಸಿಲುಕಿದ್ದು, ಇದರಲ್ಲಿ ಮೂವರು ವಿದೇಶಿಯರೂ ಇದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 15,060 ಅಡಿ ಎತ್ತರದಲ್ಲಿರುವ ಸ್ಪಿತಿ ಕಣಿವೆಯ ರಸ್ತೆಯಲ್ಲಿನ ಹಿಮ ತೆರವುಗೊಳಿಸುವ ಕಾರ್ಯಾಚರಣೆ ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತಿ ಕಠಿಣ ರಕ್ಷಣಾ ಕಾರ್ಯಾಚರಣೆಗಳಲ್ಲೊಂದಾಗಿದೆ. ಹಿಮ ಯೋಧರು ಬುಧವಾರ ಬೆಳಗ್ಗೆ ಹಿಮ ತೆರವು ಕೆಲಸ ಆರಂಭಿಸಿದ್ದಾರೆ.ಹಿಮಾಚಲ ಪ್ರದೇಶದ ಸ್ಪಿತಿ […]