ಸಮುದ್ರದಲ್ಲಿ ವಾಯು ಅಬ್ಬರ, ಮೀನುಗಾರಿಕೆ ತತ್ತರ; ಹೆಚ್ಚಾಯ್ತು ಮೋಚಾ ಚಂಡಮಾರುತ ಭೀತಿ..!!
ಮಂಗಳೂರು: ನೋಡಲು ಪ್ರಶಾಂತವಾಗಿರುವ ಸಮುದ್ರದಲ್ಲಿ ಮುಂದಕ್ಕೆ ಹೋದಂತೆ ಗಾಳಿಯ ಅಬ್ಬರ. ಗಂಟೆಗೆ 28 ಕಿ.ಮೀನಿಂದ 32 ಕಿ.ಮೀ.ವರೆಗೆ ವೇಗದ ಗಾಳಿ ಬೀಸುತ್ತಿದೆ. ಹೀಗಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಆಳಸಮುದ್ರದ ಮೀನುಗಾರಿಕೆ (fishing) ಸಂಪೂರ್ಣ ಬಂದ್ ಆಗುವ ಪರಿಸ್ಥಿತಿಯಲ್ಲಿದೆ. ಅಷ್ಟೇ ಅಲ್ಲ, ಇತರ ಮೀನುಗಾರರೂ ತಮ್ಮ ಬೋಟುಗಳನ್ನು ಕಡಲಿಗಿಳಿಸಿಲ್ಲ. ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ ಈಗಾಗಲೇ ಮೋಚಾ (Mocha cyclone) ಎಂದು ಹೆಸರಿಡಲಾಗಿದೆ. ಇದು […]