ಮಲ್ಪೆ: ಸರಸರನೆ ತೆಂಗಿನ ಮರ ಏರಿ ಶೇಂದಿ ತೆಗೆದ ಪ್ರಣವಾನಂದ ಸ್ವಾಮೀಜಿ
![](https://udupixpress.com/wp-content/uploads/2022/04/IMG_20220403_215241.jpg)
ಮೂರ್ತೆದಾರರ ಕಷ್ಟ ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರಣವಾನಂದ ಸ್ವಾಮೀಜಿ ಸ್ವತಃ ತಾವೇ ತೆಂಗಿನ ಮರ ಏರಿ ಶೇಂದಿ ತೆಗೆದಿರುವ ಬಗ್ಗೆ ವರದಿಯಾಗಿದೆ. ಭಾನುವಾರ ಉಡುಪಿಗೆ ಆಗಮಿಸಿದ ಸ್ವಾಮೀಜಿ, ಮಲ್ಪೆಯ ಮೂರ್ತೆದಾರರ ಮನೆಯೊಂದಕ್ಕೆ ಭೇಟಿ ನೀಡಿ ಮೂರ್ತೆದಾರಿಕೆ ಸಮಸ್ಯೆ ಕುರಿತು ಮಾತುಕತೆ ನಡೆಸಿ ಚರ್ಚಿಸಿದರು. ಬಳಿಕ ಸ್ವಾಮೀಜಿ ಮನೆಯ ಎದುರಿನ ತೆಂಗಿನ ಮರಕ್ಕೆ ಸರಸರನೇ ಏರಿದರು. ತೆಂಗಿನ ಮರದ ತುದಿಯಲ್ಲಿದ್ದ ಶೇಂದಿಯನ್ನು ತೆಗೆದು ಎಲ್ಲರನ್ನು ನಿಬ್ಬೆರಗುಗೊಳಿಸಿದರು.