ಮಲ್ಪೆ ಆಹಾರಮೇಳದಲ್ಲಿದೆ ಬಾಯಲ್ಲಿ ನೀರೂರಿಸುವ ಖಾದ್ಯ ವೈವಿದ್ಯ: ಇಂದಿನಿಂದ ಉಡುಪಿಯಲ್ಲಿ ಆಹಾರಮೇಳ ಆಹಾರ ಪ್ರಿಯರೇ ಮಿಸ್ ಮಾಡ್ಕೊಬೇಡಿ!

ಮಲ್ಪೆ : ಇಂದಿನಿಂದ ಉಡುಪಿಯಲ್ಲಿ ಖಾದ್ಯಪ್ರಿಯರ ಆಹಾರದ ಆಸೆಯನ್ನು ಈಡೇರಿಸಲು ಮಲ್ಪೆ ಆಹಾರಮೇಳ ಶುರುವಾಗಿದೆ. ಇಲ್ಲಿನ ಪರಶುರಾಮ ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜ.11ರಿಂದ 14ರವರೆಗೆ 4 ದಿನಗಳ ಕಾಲ ಮಲ್ಪೆ ಫುಡ್ ಫೆಸ್ಟ್ ಎಂಬ ಆಹಾರ ಮೇಳ ನಡೆಯಲಿದ್ದು ವಿವಿಧ ಅಹಾರ ಮೇಳಗಳ ಸ್ಟಾಲ್‌ಗಳು, ಸಾಂಸ್ಕೃತಿಕ ವೇದಿಕೆಗಳು ಜಿಲ್ಲೆಯ ಜನರನ್ನು ಸೆಳೆಯುವಂತೆ ಆಯೋಜನೆಗೊಂಡಿದೆ. ಬೃಹದಾಕರಾದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇಳಲಿವೆ. ಇಂದು ಸಂಜೆ ಸ್ಥಳೀಯ 5 ಭಜನಾ ಮಂದಿರಗಳ ಅಧ್ಯಕ್ಷರು ಹಾಗೂ ಮಲ್ಪೆ ಅಯ್ಯಪ್ಪಸ್ವಾಮಿ […]