ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿರುವುದು ಖೇದಕರ:ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಆಕ್ರೋಶ

ಮಂಗಳೂರು : ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಕಾರ್ಮಿಕ ಮಹಿಳೆಯನ್ನು ಕಲಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ನಿಜಕ್ಕೂ ಖೇದಕರ ಎಂದು ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಸಂಸ್ಕೃತಿಯ ನಾಡು ದೇಗುಲಗಳ ಬೀಡು ಎಂದೇ ಕರೆಯಲ್ಪಡುವ ಉಡುಪಿ ಜಿಲ್ಲೆಗೆ ಇಂತಹ ಘಟನೆಗಳು ಶೋಭೆ ತರುವಂತದಲ್ಲ. ಘಟನೆ ಕುರಿತು ಸೂಕ್ತ ಕ್ರಮಕ್ಕೆ ನಾಗರಿಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವರಲ್ಲಿ ಘಟನೆಯನ್ನು ವಿವರಿಸಿ ಆರೋಪಿಗಳ […]