ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು: ಮಾಲಿನಿ ಜೆ. ಶೆಟ್ಟಿ
ಉಡುಪಿ, ಜುಲೈ 19: ಜನಸಂಖ್ಯೆ ಹೆಚ್ಚಳ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು. ಸಮತೋಲಿತ ಸಮುದಾಯ ಮತ್ತು ಸಂಪನ್ಮೂಲಗಳ ಬಳಕೆ ಸರಿಯಾದ ದಾರಿಯಲ್ಲಿ ಇರಬೇಕು ಮುಂದಿನ ಪೀಳಿಗೆ ಈ ದಿಸೆಯಲ್ಲಿ ಸಾಗಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ ತಿಳಿಸಿದರು. ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕಾರ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು […]