ಮುಕ್ಕಚ್ಚೇರಿ: ಹೊಡೆದಾಟ-ಗುಂಡು ಹಾರಾಟ ಪ್ರಕರಣ ಹಲವರ ಬಂಧನ

ಮಂಗಳೂರು: ಮಂಗಳೂರಿನ ‌ಮುಕ್ಕಚ್ಚೇರಿ ಕಡಪರದಲ್ಲಿ ನಡೆದಿದ್ದ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್ ಎಂಬುವವರು ಗಾಯಗೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬುವವರ ತಂಡಗಳ ನಡುವೆ ರಾತ್ರಿ ಹೊಡೆದಾಟ ನಡೆದು ಗುಂಡು ಹಾರಿಸಲಾಗಿತ್ತು. ಆರಂಭದಲ್ಲಿ ವಾಟ್ಸ್‌ಆ್ಯಪ್ ಸಂದೇಶದ ವಿಚಾರವಾಗಿ ಸುಹೈಲ್ […]