ಮಲ್ತಿ ದ್ವೀಪದಲ್ಲಿರುವ ಪರಾಶಕ್ತಿ ದೇವತೆಗೆ ಕೊಡವೂರು ದೇವಳದಿಂದ ಮಕರಸಂಕ್ರಾಂತಿ ವಿಶೇಷ ಪೂಜೆ, ಪ್ರಾರ್ಥನೆ
ಮಲ್ಪೆ ಸಮೀಪ ಮಲ್ತಿ ದ್ವೀಪ ದ ಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ ಪೂಜೆ ಸಲ್ಲಿಸುವುದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿನಿಂದಲೂ ಈ ಶಕ್ತಿ ದೇವತೆ ಇದ್ದರೂ ಕಾಲಾಂತರದಲ್ಲಿ ಪೂಜಾಕ್ರಮ ನಿಂತು ಹೋಗಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಹಲವಾರು ವರ್ಷಗಳಿಂದ ಕೊಡವೂರು ದೇವಸ್ಥಾನದಿಂದ ಪೂಜೆ ಸಲ್ಲಿಕೆಯಾಗುತ್ತಿದೆ. ಪೂಜಾ ವಿಧಿವಿಧಾನಗಳನ್ನು ದೇವಳದ […]