ಶಬರಿಮಲೆ ಅಯ್ಯಪ್ಪ ದೇಗುಲ: ಮಕರಜ್ಯೋತಿಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಬುಧವಾರ ಸಂಜೆ 6.43ಕ್ಕೆ ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು. ಇರುಮುಡಿ ಹೊತ್ತಿದ್ದ ಭಕ್ತರು ದೇವಾಲಯದ ಆವರಣ ಮತ್ತು ಇತರೆಡೆಗಳಲ್ಲಿ ಮಕರಜ್ಯೋತಿ ದರ್ಶನಕ್ಕಾಗಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು. ದೇಗುಲದಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಕಾಡಿನೊಳಗಿನಿಂದ ಮಕರಜ್ಯೋತಿ ಕಾಣಿಸಿಕೊಂಡಾಗ ಪುಳಕಿತರಾದರು. ಜ್ಯೋತಿಯನ್ನು ವೀಕ್ಷಿಸಲು ಶಬರಿಮಲೆ ಮತ್ತು ಸುತ್ತಮುತ್ತಲಿನ ವಿವಿಧ ವೀಕ್ಷಣಾ ಸ್ಥಳಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಪತ್ತನಂತಿಟ್ಟದ ಪಂದಳಂ ಅರಮನೆಯಿಂದ ಮೆರವಣಿಗೆ ಮೂಲಕ ತರಲಾದ ‘ತಿರುವಾಭರಣ’ದಿಂದ (ಪವಿತ್ರ […]