ಮಲ್ಪೆ ಮಾಲ್ತಿದ್ವೀಪದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

ಉಡುಪಿ: ಉಡುಪಿಯ ಮಲ್ಪೆ ಸಮೀಪದ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ಮಲ್ಪೆ ಮಾಲ್ತಿದ್ವೀಪದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ವಿಶೇಷ ಪೂಜೆ ನಡೆಯುತ್ತದೆ. ಈ ಪೂಜೆಯು ಮಲ್ಪೆ ಸಮುದ್ರ ತೀರದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಮಾಲ್ತಿದ್ವೀಪದಲ್ಲಿರುವ ಶ್ರೀ ಆದಿಪರಾಶಕ್ತಿ ಸನ್ನಿಧಾನದಲ್ಲಿ ನಡೆಯುತ್ತದೆ. ಈ ದ್ವೀಪದಲ್ಲಿರುವ ದೇವಿಯ ಸನ್ನಿಧಾನವು ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಪಟ್ಟ ಆದಿ ದೇವಸ್ಥಾನ ಎಂದು ನಂಬಲಾಗಿದೆ. ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯಂದು ಮಾತ್ರ ಇಲ್ಲಿ ದೇವಸ್ಥಾನದ ವತಿಯಿಂದ ಸಾರ್ವಜನಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದ […]