ಎಂಐಟಿ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರಿಗೆ ಪಿಹೆಚ್.ಡಿ ಪದವಿ
ಮಣಿಪಾಲ: ಎಂಐಟಿ ವಿದ್ಯಾರ್ಥಿನಿ, ಹೆರ್ಗ ರಾಘವೇಂದ್ರ ನಾಯಕ್ ಅವರ ಪತ್ನಿ ರಶ್ಮಿ ಸಾಮಂತ್ ಇವರು, ಮಣಿಪಾಲದ ಎಂಐಟಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್. ಓ. ಡಿ. ಆಗಿರುವ ಡಾ. ಜಿ. ಸುಬ್ರಮಣ್ಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಡಿಸೈನ್ ಎಂಡ್ ಇಂಪ್ಲಿಮೆಂಟೇಶನ್ ಆಫ್ ಎನ್ ಎಫೀಶಿಯೆಂಟ್ ಆಸಿಕ್ ಫಂಕ್ಷನಲ್ ಯುನಿಟ್ ಫಾರ್ ಸ್ಟ್ಯಾಂಡಲೋನ್ ಇಮೇಜ್ ಪ್ರೊಸೆಸಿಂಗ್ ಅಪ್ಲಿಕೇಶನ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯ ಪಿ.ಹೆಚ್.ಡಿ ನೀಡಿದೆ. ರಶ್ಮಿ ಇವರು ಮುಂಡ್ಕಿನಜಡ್ಡು […]
ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್: ಜಿಲ್ಲಾ ಕರಾಟೆ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ
ಮಣಿಪಾಲ: ಮಹಾರಾಷ್ಟ್ರದ ಪುಣೆಯಲ್ಲಿ ಕರಾಟೆ ಇಂಡಿಯಾ ಸಂಸ್ಥೆ ವತಿಯಿಂದ ಜೂನ್17 ರಿಂದ 19 ರವರೆಗೆ ಆಯೋಜಿಸಲಾಗಿದ್ದ ಅಖಿಲ ಭಾರತ ಕರಾಟೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಗೆದ್ದ ಎಂಟು ಪದಕಗಳಲ್ಲಿ ಐದು ಪದಕಗಳು ಉಡುಪಿ ಜಿಲ್ಲೆಯ ಆಟಗಾರರದ್ದಾಗಿತ್ತು. 2 ಚಿನ್ನ, 2 ಬೆಳ್ಳಿ, 1 ಕಂಚಿನೊಂದಿಗೆ ಜಿಲ್ಲೆಯ ಆಟಗಾರರು ಒಟ್ಟು ಐದು ಪದಕಗಳನ್ನು ತಮ್ಮದಾಗಿಸಿಕೊಂಡರು. ಪದಕ ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ಕರಾಟೆ ಆಟಗಾರರಿಗೆ ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಹಾಗೂ ಮಾಹೆ ಸಹಯೋಗದಲ್ಲಿ […]
ಯೂನಿವರ್ಸಿಟಿ ರೋವರ್ ಚಾಲೆಂಜ್ ಸ್ಪರ್ಧೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ: 21 ನೇ ಸ್ಥಾನ ಗಳಿಕೆ
ಮಣಿಪಾಲ: ಇಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆಯ ವಿದ್ಯಾರ್ಥಿ ತಂಡವು ಜೂನ್ 1 ರಿಂದ 4 ರವರೆಗೆ ಅಮೇರಿಕಾದ ಹ್ಯಾಂಕ್ಸ್ವಿಲ್ಲೆ, ಉತಾಹ್ ನ ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್‌ನಲ್ಲಿ ನಡೆದ ‘ಯೂನಿವರ್ಸಿಟಿ ರೋವರ್ ಚಾಲೆಂಜ್ 2022’ ಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಎಂಐಟಿಯ ‘ಮಾರ್ಸ್ ರೋವರ್ ಮಣಿಪಾಲ್’ ತಂಡವು ಸ್ಪರ್ಧೆಯಲ್ಲಿ ಒಟ್ಟಾರೆ 21 ನೇ ಸ್ಥಾನವನ್ನು ಗಳಿಸಿದೆ ಮತ್ತು ಅತ್ಯುತ್ತಮ ವಿಜ್ಞಾನ ತಂಡವಾಗಿ “ಜಾನ್ ಬರೈಂಕಾ ಪ್ರಶಸ್ತಿ”ಯನ್ನು ಸಹ ಗೆದ್ದುಕೊಂಡಿದೆ. ಯೂನಿವರ್ಸಿಟಿ ರೋವರ್ ಚಾಲೆಂಜ್ ವಾರ್ಷಿಕವಾಗಿ […]
ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಪ್ರವೇಶಾತಿ ಆರಂಭ
ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಮೂರು ನೂತನ ಮಾದರಿಯ ಪದವಿ ಮತ್ತು ಸ್ನಾತಕ್ಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿ ಪ್ರಾರಂಭವಾಗಿದೆ ಮತ್ತು ಈ ತಿಂಗಳ ಅಂತ್ಯದವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೂರು ನೂತನ ಕಾರ್ಯಕ್ರಮಗಳಾದ – ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್) , ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್), ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) – ಅಪಾರವಾದ ಸಮಕಾಲೀನ ಪ್ರಾಮುಖ್ಯತೆಯೊಂದಿಗೆ, ವಿವಿಧ ಕಲಿಕಾ ವಿಷಯಗಳ ಮೇಲೆ ಕೇಂದ್ರಿತವಾಗಿದೆ. ಎರಡು ಸ್ನಾತಕೋತ್ತರ […]
ಪ್ರಾಜೆಕ್ಟ್ ಮಾನಸ್: ಅಮೇರಿಕಾದಲ್ಲಿ ನಡೆದ ಡ್ರೋನ್ ಸ್ಪರ್ಧೆಯಲ್ಲಿ ಮಿಂಚಿದ ಮೈಟ್-ಮಾಹೆ ವಿದ್ಯಾರ್ಥಿಗಳ ತಂಡ
ಮಣಿಪಾಲ: ಅಮೇರಿಕಾದಲ್ಲಿ ನಡೆದ ಡೋನ್ ಸ್ಪರ್ಧೆಯಲ್ಲಿ ಎಂಐಟಿ-ಮಾಹೆಯ ವಿದ್ಯಾರ್ಥಿಗಳ ತಂಡ ಮಿಂಚಿ ಜಿಲ್ಲೆಗೆ ಕೀರ್ತಿ ತಂದಿದೆ. ತಂಡವು ಜೂನ್ 15 ರಿಂದ18 ರವರೆಗೆ ಸೇಂಟ್ ಮೇರಿಸ್, ಮೇರಿಲ್ಯಾಂಡ್, ಯು.ಎಸ್.ಎ ನಲ್ಲಿ ನಡೆದ AUVSI SUAS – 2022 (ಅಸೋಸಿಯೇಷನ್ ಫಾರ್ ಅನ್ ಮ್ಯಾನ್ಡ್ ವೆಹಿಕಲ್ ಸಿಸ್ಟಮ್ಸ್ ಅಂತರಾಷ್ಟ್ರೀಯ ವಿದ್ಯಾರ್ಥಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು) ಇದರಲ್ಲಿ ಭಾಗವಹಿಸಿತ್ತು. ಪ್ರಪಂಚದಾದ್ಯಂತ ಸ್ಪರ್ಧಿಸಿದ 71 ತಂಡಗಳ ಪೈಕಿ ಪ್ರಾಜೆಕ್ಟ್ ಮಾನಸ್ 18 ನೇ ಶ್ರೇಯಾಂಕವನ್ನು ಪಡೆದಿದೆ. ತಂಡವು ಫ್ಲೈಟ್ ರೆಡಿನೆಸ್ ರಿವ್ಯೂ […]