ಎಂಐಟಿಯ ತಾಂತ್ರಿಕ ಶಿಕ್ಷಕ ಡಾ. ಮನೋಹರ ಪೈ ಗೆ ರಾಷ್ಟ್ರೀಯ ಪ್ರಶಸ್ತಿ

ಮಣಿಪಾಲ: ಭಾರತದ ಶಿಕ್ಷಣ ಸಚಿವಾಲಯದ ತಾಂತ್ರಿಕ ಶಿಕ್ಷಕರ ವಿಭಾಗದಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿಯು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ತಾ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಮನೋಹರ ಪೈ ಎಂ.ಎಂ, ಇವರಿಗೆ ಲಭಿಸಿದೆ. ಸೆಪ್ಟೆಂಬರ್ 6 ರಂದು ದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ .ಮನೋಹರ ಪೈ ಅವರಿಗೆ ಪ್ರಶಸ್ತಿ ನೀಡಲಾಯಿತು. ಭಾರತ ಸರ್ಕಾರದ ಶಿಕ್ಷಣ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ರಾಜ್‌ಕುಮಾರ್ ರಂಜನ್ ಸಿಂಗ್, ಡಾ. ಸುಭಾಷ್ […]

ಏಕ ಬಳಕೆಯ ಪೆನ್ನುಗಳಿಂದ ಮುಕ್ತಿ ಪಡೆಯಲು ಮಾಹೆಯ ‘ರಿ-ಪೆನ್’ ಯೋಜನೆ 

ಮಣಿಪಾಲ: ಏಕ ಬಳಕೆಯ ಪೆನ್ನುಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಮತ್ತು ಮರುಪೂರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ‘ರಿ-ಪೆನ್’ ಎಂಬ ಸಿ. ಎಸ್. ಆರ್ ಪ್ರಾಯೋಜಿತ ಯೋಜನೆಯನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಇವರು ಉದ್ಘಾಟಿಸಿದರು. ಈ ‘ರಿ-ಪೆನ್’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪುತ್ತೂರಿನ ಶ್ಯಾಮಾ ಜ್ಯುವೆಲ್ಸ್ ಪ್ರೈ. ಲಿ ಸಂಸ್ಥೆಯು ತನ್ನ ಸಿ. ಎಸ್. ಆರ್ ನಿಧಿಯಿಂದ ಆರ್ಥಿಕ ಸಹಾಯವನ್ನು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಇಕೋ ಕ್ಲಬ್ ಗೆ ನೀಡಿದೆ. ಪರಿಸರದ ಉಳಿವಿಗಾಗಿ ಇಂಗಾಲಾಮ್ಲದ […]

ಕೋವಿಶೀಲ್ಡ್ ಲಸಿಕೆಯು ಪುರುಷ ಫಲವತ್ತತೆಯ ಸಾಮರ್ಥ್ಯಕ್ಕೆ ಹಾನಿಕಾರಕವಲ್ಲ: ಕಸ್ತೂರ್ಬಾ ವೈದ್ಯಕೀಯ ತಂಡದ ಸಂಶೋಧನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಫಲವತ್ತತೆ ತಜ್ಞರ ತಂಡವು ಇದೆ ಮೊದಲ ಬಾರಿಗೆ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದ ಪುರುಷರಲ್ಲಿ ವೀರ್ಯದ ಗುಣಮಟ್ಟದಲ್ಲಿನ ಬದಲಾವಣೆಗಳ ಪ್ರಾಯೋಗಿಕ ಸಂಶೋಧನೆ ನಡೆಸಿದೆ. ಸಂಶೋಧನಾ ವರದಿಯನ್ನು ಸೆ 5 ರಂದು ಯುಕೆ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಎಂಡ್ ಫರ್ಟಿಲಿಟಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ನಂತರ ಪುರುಷರಲ್ಲಿ ಫಲವತ್ತತೆ ನಶಿಸಿ ಹೋಗುತ್ತದೆ ಎಂಬ ವರದಿಗಳನ್ನು ಆಧರಿಸಿ ಬಹುತೇಕ ಪುರುಷರು ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಲಸಿಕೆಯು ಪುರುಷರ […]

ಸೆಪ್ಟಂಬರ್ 17 ರಂದು ಯೋಗಥಾನ್: 15000 ಮಂದಿಯಿಂದ ಏಕಕಾಲದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ

ಉಡುಪಿ: ಸೆಪ್ಟಂಬರ್ 17 ರಂದು 15000 ಮಂದಿಯಿಂದ ಏಕಕಾಲದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚಿಸಿದರು. ಅವರು ಶುಕ್ರವಾರ ಉಡುಪಿ ತಾಲೂಕು ಕಚೇರಿ ಸಭಾಂಗಣದಲ್ಲಿ, ಯೋಗಾಥಾನ್ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರವು ಈಗಾಗಲೇ ಯೋಗವನ್ನು ಶಾಲಾ ಮತ್ತು ಕಾಲೇಜು ಶಿಕ್ಷಣದಲ್ಲಿ ಪಠ್ಯವನ್ನಾಗಿ ಸೇರ್ಪಡೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ […]

ಮಾಹೆ: ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರ ಕುರಿತು 3 ನೇ ರಾಷ್ಟ್ರೀಯ ಸಮಾವೇಶ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರ ಕುರಿತು ತನ್ನ 3 ನೇ ರಾಷ್ಟ್ರೀಯ ಸಮಾವೇಶ ವನ್ನು ಸೆಪ್ಟೆಂಬರ್ 17 ರಂದು ಮಣಿಪಾಲದ ಡಾ ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಿದೆ. ಯುವಜನರಲ್ಲಿ ಕೊಡುವಿಕೆಯ ಪರಿಕಲ್ಪನೆಯನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಸಂವೇದನಾಶೀಲರಾಗಲು ಸಹಾಯ ಮಾಡುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಮಾಹೆ ಮತ್ತು ಮಾಹೆಯೇತರ ಸಂಸ್ಥೆಗಳಿಂದ ಸುಮಾರು 1000 ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಣಿಪಾಲ್ ಗ್ಲೋಬಲ್ […]