ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಕಾರ್ಕಳದ ಮುಂಡ್ಲಿಯ ಕೃಷಿಕ ಮಾಧವ ಗೌಡರ ಸಾಧನೆಯ ಕತೆ ಒಮ್ಮೆ ಕೇಳಿ!
ಕೃಷಿಯಲ್ಲಿ ವಿನೂತನವಾದ ಕೃಷಿ ವಿಧಾನವನ್ನು ಬಳಸಿಕೊಂಡು ಇಳುವರಿ ಪಡೆಯುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿಯ ಕೃಷಿಕ ಮಾಧವ ಗೌಡ. ಅಡಿಕೆ, ಬಾಳೆ, ಕರಿಮೆಣಸು, ಭತ್ತ, ತೆಂಗು, ಸುವರ್ಣ ಗೆಡ್ಡೆ ಮೊದಲಾದ ಬೆಳೆಗಳನ್ನು ಬೆಳೆಸುತ್ತಲೇ ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು ಮಾಧವ ಗೌಡರು. ಗೌಡರಿಗೆ ಸುಮರು ಎಂಟುವರೆ ಎಕರೆ ಜಾಗವಿದೆ. ಆ ಜಾಗವನ್ನು ಕ್ರಮವಾಗಿ ಬಳಸಿಕೊಂಡು ಕೃಷಿ ಮಾಡಿದ್ದಾರೆ. ಮಿಶ್ರ ಬೆಳೆಗೆ ಗೌಡರು ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಿದ್ದು ಕ್ಯಾವೆಂಡಿಷ್ ಬಾಳೆ, ಕಾಳುಮೆಣಸು, ಸುವರ್ಣ ಗೆಡ್ಡೆ ಕೃಷಿಯನ್ನು […]